₹5 ಲಕ್ಷ ಆದಾಯಕ್ಕೆ ತೆರಿಗೆ ಇದೆಯಾ? – 2025-26 ನಿಯಮಗಳ ಪ್ರಕಾರ ಸ್ಪಷ್ಟ ಉತ್ತರ


₹5 ಲಕ್ಷ ಆದಾಯಕ್ಕೆ ತೆರಿಗೆ ಇದೆಯಾ?

“ನನ್ನ ಆದಾಯ ₹5 ಲಕ್ಷ ಇದೆ.
ನಾನು ತೆರಿಗೆ ಕಟ್ಟಬೇಕಾ?”

ಇದು ಇನ್ನೂ ಬಹುತೇಕ ಜನರ ಮೊದಲ ಪ್ರಶ್ನೆ.
ಆದ್ರೆ 2025-26ರ ಹೊಸ ನಿಯಮಗಳ ನಂತರ,
ಈ ಪ್ರಶ್ನೆಗೆ ಉತ್ತರ ಸ್ವಲ್ಪ ಬದಲಾಗಿದೆ.

👉 “ಆದಾಯ ತೆರಿಗೆ ಅಂದ್ರೆ ಏನು?” ಅನ್ನೋದನ್ನು basic ಆಗಿ ತಿಳಿದುಕೊಳ್ಳಲು ಈ ಲೇಖನ ಓದಿ: ಆದಾಯ ತೆರಿಗೆ ಅಂದ್ರೆ ಏನು? – ಸಾಮಾನ್ಯ ಜನರಿಗೆ ಸರಳವಾಗಿ.

👉 ಇವತ್ತು ತೆರಿಗೆ ವಿಷಯದಲ್ಲಿ
₹5 ಲಕ್ಷಕ್ಕಿಂತಲೂ ಹೆಚ್ಚು ₹12 ಲಕ್ಷದವರೆಗೆ ತೆರೆಗೆ ಪಾವತಿ ಮಾಡಬೇಕಾ

ಈ ಲೇಖನದಲ್ಲಿ ಗೊಂದಲವಿಲ್ಲದೆ,
ಸರಳವಾಗಿ ಅರ್ಥವಾಗುವಂತೆ ನೋಡೋಣ.


ಮೊದಲು ಒಂದು ಮುಖ್ಯ ವಿಷಯ ತಿಳಿದುಕೊಳ್ಳಿ

ಇತ್ತೀಚಿನ ವರ್ಷಗಳಲ್ಲಿ ಸರ್ಕಾರ
ಹೊಸ ತೆರಿಗೆ ವ್ಯವಸ್ಥೆ (New Tax Regime) ಅನ್ನು
ಮುಖ್ಯ ವ್ಯವಸ್ಥೆಯಾಗಿ ಮಾಡಿದೆ.

ಇಂದಿನ ಬಹುತೇಕ ತೆರಿಗೆ ಲೆಕ್ಕಾಚಾರಗಳು
👉 ಹೊಸ ತೆರಿಗೆ ವ್ಯವಸ್ಥೆಯ ಆಧಾರದಲ್ಲೇ ನಡೆಯುತ್ತವೆ.

ಹಳೆಯ ತೆರಿಗೆ ವ್ಯವಸ್ಥೆ ಇನ್ನೂ ಇದೆ,
ಆದ್ರೆ ಅದನ್ನು ಆಯ್ಕೆ ಮಾಡಬೇಕಾದರೆ
ನೀವು ಸ್ವಯಂ ಆಯ್ಕೆ ಮಾಡಬೇಕು.


2025-26ರಲ್ಲಿ ₹5 ಲಕ್ಷ ಆದಾಯಕ್ಕೆ ತೆರಿಗೆ ಇದೆಯಾ?

ಸರಳ ಉತ್ತರ 👇
👉 ಇಲ್ಲ, ಸಾಮಾನ್ಯವಾಗಿ ಇಲ್ಲ.

2025-26ರ ಹೊಸ ತೆರಿಗೆ ವ್ಯವಸ್ಥೆಯಲ್ಲಿ:

  • ₹5 ಲಕ್ಷ ಆದಾಯ ಇದ್ದರೆ
  • ತೆರಿಗೆ ಪಾವತಿಸಬೇಕಾದ ಅವಶ್ಯಕತೆ ಇರೋದಿಲ್ಲ

ಅಷ್ಟೇ ಅಲ್ಲ…

👉 ₹12 ಲಕ್ಷವರೆಗಿನ ತೆರಿಗೆಯೋಗ್ಯ ಆದಾಯಕ್ಕೂ
ಬಹುತೇಕ ಜನರಿಗೆ ತೆರಿಗೆ ಬರುವುದಿಲ್ಲ.

ಇದು 2025-26ರ ದೊಡ್ಡ ಬದಲಾವಣೆ.


ಹಾಗಾದ್ರೆ ₹5 ಲಕ್ಷ ಅನ್ನೋ ಗೊಂದಲ ಯಾಕೆ ಇತ್ತು?

ಹಿಂದಿನ ವರ್ಷಗಳಲ್ಲಿ:

  • ₹5 ಲಕ್ಷವರೆಗೆ rebate ಇತ್ತು
  • ಅದಕ್ಕಿಂತ ಜಾಸ್ತಿ ಆದಾಯಕ್ಕೆ ತೆರಿಗೆ ಬರ್ತಿತ್ತು

ಆದ್ರೆ ಹೊಸ ನಿಯಮಗಳಲ್ಲಿ:

👉 rebate ಮಿತಿಯನ್ನು ಹೆಚ್ಚಿಸಲಾಗಿದೆ
👉 ತೆರಿಗೆ slabs ಬದಲಾಗಿದೆ

ಅದಕ್ಕಾಗಿಯೇ ಈಗ
₹5 ಲಕ್ಷ ಅನ್ನೋ ಸಂಖ್ಯೆ ಅಷ್ಟು ಮುಖ್ಯವಾಗಿಲ್ಲ.


“₹12 ಲಕ್ಷವರೆಗೂ ತೆರಿಗೆ ಇಲ್ಲ” ಅಂದ್ರೆ ಏನು?

ಇದು ಬಹಳ ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕು.

ಇಲ್ಲಿ ಹೇಳುವ ₹12 ಲಕ್ಷ ಅಂದ್ರೆ:

  • ತೆರಿಗೆಯೋಗ್ಯ ಆದಾಯ (Taxable Income)

ಅಂದರೆ:

  • ನಿಮ್ಮ ಒಟ್ಟು ಆದಾಯ
  • ಮಾನಕ ಕಡಿತ (standard deduction)
  • ಇತರೆ ಅನ್ವಯವಾಗುವ ಕಡಿತಗಳು

ಇವನ್ನೆಲ್ಲಾ ತೆಗೆದ ನಂತರ ಉಳಿಯುವ ಮೊತ್ತ.

👉 ಆ ಮೊತ್ತ ₹12 ಲಕ್ಷದ ಒಳಗೆ ಇದ್ದರೆ,
ಹೊಸ ತೆರಿಗೆ ವ್ಯವಸ್ಥೆಯಲ್ಲಿ
ತೆರಿಗೆ ಸಾಮಾನ್ಯವಾಗಿ ಬರುವುದಿಲ್ಲ.


ಹಾಗಾದ್ರೆ ಎಲ್ಲರಿಗೂ ತೆರಿಗೆ ಇಲ್ಲವೇ?

👉 ITR ಅಂದ್ರೆ ಏನು? – ಯಾರು ಫೈಲ್ ಮಾಡಬೇಕು, ಯಾಕೆ ಮುಖ್ಯ? ಅನ್ನೋದನ್ನು ಇಲ್ಲಿ detail ಆಗಿ ಓದಿ.

ಇಲ್ಲ.

ತೆರಿಗೆ ಕಟ್ಟಬೇಕಾ ಅಥವಾ ಬೇಡ ಎಂಬುದು ನಿಮ್ಮ ಆದಾಯದ ಮೇಲೆ ನಿರ್ಧಾರಿತವಾಗಿರುತ್ತದೆ

  • ನಿಮ್ಮ ಆದಾಯ ಎಷ್ಟು
  • ಯಾವ ತೆರಿಗೆ ವ್ಯವಸ್ಥೆ ಆಯ್ಕೆ ಮಾಡಿದ್ದೀರಾ
  • ನಿಮ್ಮ ಆದಾಯದ ಸ್ವರೂಪ ಏನು

ಇವನ್ನೆಲ್ಲಾ ಅವಲಂಬಿಸಿದೆ.

ಉದಾಹರಣೆಗೆ:

  • Salary ಮಾತ್ರ ಇದ್ದವರಿಗೆ ಲೆಕ್ಕ ಒಂದು
  • Salary + interest + rent ಇದ್ದವರಿಗೆ ಲೆಕ್ಕ ಬೇರೆ

ಅದಕ್ಕಾಗಿಯೇ:
👉 “ನನ್ನ friendಗೆ ತೆರಿಗೆ ಇಲ್ಲ”
👉 “YouTubeನಲ್ಲಿ ಹೇಳಿದ್ರು”
ಅನ್ನೋ ಆಧಾರದ ಮೇಲೆ ತೀರ್ಮಾನ ಮಾಡಬೇಡಿ.


ತೆರಿಗೆ ಇಲ್ಲ ಅಂದ್ರೆ ITR ಫೈಲ್ ಮಾಡಬಾರ್ದಾ?

ಇದು ಇನ್ನೊಂದು ಸಾಮಾನ್ಯ ತಪ್ಪು ಕಲ್ಪನೆ.

ತೆರಿಗೆ ಪಾವತಿಸಬೇಕಾಗಿಲ್ಲ ಅಂದ್ರೆ:
❌ ITR ಫೈಲ್ ಮಾಡಬಾರದು ಅಂತ ಅಲ್ಲ.

ಕೆಲವು ಸಂದರ್ಭಗಳಲ್ಲಿ:

  • ITR ಫೈಲ್ ಮಾಡೋದು ಉಪಯುಕ್ತ
  • future loan
  • visa
  • income proof

ಇವಕ್ಕೆಲ್ಲಾ ಸಹಾಯ ಮಾಡುತ್ತೆ.

👉 ITR = income ತಿಳಿಸುವ ಪ್ರಕ್ರಿಯೆ
👉 Tax payment = ಬೇರೆ ವಿಷಯ


ನಿಮ್ಮಿಗೆ ತೆರಿಗೆ ಇದೆಯಾ ಇಲ್ಲವಾ ಹೇಗೆ ಖಚಿತಪಡಿಸಿಕೊಳ್ಳಬೇಕು?

ಸರಳವಾಗಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ನನ್ನ ತೆರಿಗೆಯೋಗ್ಯ ಆದಾಯ ಎಷ್ಟು?
  • ನಾನು ಹೊಸ ವ್ಯವಸ್ಥೆಯಲ್ಲಿದ್ದೀನಾ?
  • rebateಗೆ ಅರ್ಹನಾಗಿದ್ದೀನಾ?

ಈ ಮೂರು clear ಆದ್ರೆ
ಗೊಂದಲವೇ ಇರೋದಿಲ್ಲ.


ಕೊನೆಯ ಮಾತು

2025-26ರಿಂದ ತೆರಿಗೆ ವ್ಯವಸ್ಥೆ
ಸಾಮಾನ್ಯ ಜನರಿಗೆ ಸ್ವಲ್ಪ ಸುಲಭವಾಗಿದೆ.

₹5 ಲಕ್ಷ ಆದಾಯ ಇದ್ದರೆ
ಹೆಚ್ಚಿನ ಸಂದರ್ಭಗಳಲ್ಲಿ
ತೆರಿಗೆ ಬಗ್ಗೆ ಭಯಪಡಬೇಕಾಗಿಲ್ಲ.

ಆದ್ರೆ:

  • ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು
  • ಅಂದಾಜಿನ ಮೇಲೆ ನಿರ್ಧಾರ ಮಾಡಬಾರದು

ಮುಂದಿನ ಲೇಖನಗಳಲ್ಲಿ:

  • ಹೊಸ vs ಹಳೆಯ ತೆರಿಗೆ ವ್ಯವಸ್ಥೆ
  • ₹12 ಲಕ್ಷ ಆದಾಯಕ್ಕೆ ತೆರಿಗೆ ಲೆಕ್ಕ
  • ITR basics

ಇವೆಲ್ಲವನ್ನೂ ಹಂತ ಹಂತವಾಗಿ ನೋಡೋಣ.


ಅಸ್ವೀಕರಣ

ಈ ಲೇಖನವು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ.
ಯಾವುದೇ ತೆರಿಗೆ ನಿರ್ಧಾರ ಮಾಡುವ ಮೊದಲು
ತಜ್ಞರ ಸಲಹೆ ಪಡೆಯುವುದು ಒಳಿತು.

Leave a Comment

Your email address will not be published. Required fields are marked *